ಹದವರಿತ ಕುಡಿತ ತಡೆಯುತ್ತಾ ಮೂಳೆ ಸವೆತ?
ಅರುವತ್ತರ ಹರೆಯದ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಒಂದು ಹದಕ್ಕೆ ಮದ್ಯಪಾನ ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮವಂತೆ. ಹಾಗಂತ ಹೊಸ ಅಧ್ಯಯನ ಒಂದು ಹೇಳಿದೆ.

ನಿಯಮಿತವಾಗಿ ಬಿಯರ್ ಮತ್ತು ವೈನ್ಅನ್ನು ಹದವರಿತು ಸೇವಿಸುವುದು ಅಸ್ಥಿಯ ರಕ್ಷಣೆಗೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಹೇಳುತ್ತದೆ. ಆದರೆ ಕಂಡಾಪಟ್ಟೆ ಕುಡಿತವು ಇದಕ್ಕೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಮೂಳೆಯ ನಾಶಕ್ಕೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದೆ.

ಟಫ್ಸ್ ವಿಶ್ವವಿದ್ಯಾನಿಲಯದ ಹ್ಯೂಮನ್ ನ್ಯೂಟ್ರಿಶಿಯನ್ ರೀಸರ್ಚ್ ಸೆಂಟರ್ ಆನ್ ಏಜಿಂಗ್ನ ಸಂಶೋಧಕರು ಈ ವಿಷಯವನ್ನು ಪತ್ತೆ ಹಚ್ಚಿದ್ದಾರೆ. ಆದರೆ ದಿನವೊಂದರ ಎರಡು ಪೆಗ್ ಏರಿಸುವ ಪುರುಷರಲ್ಲಿ ಬೋನ್ ಮಾಸ್ ಡೆನ್ಸಿಟಿ(ಬಿಎಂಡಿ)ಯು ಗಮನೀಯವಾಗಿ ಕಡಿಮೆ ಇರುತ್ತದೆ.

ಈ ಹಿಂದಿನ ಅಧ್ಯಯನಗಳು ಮಿತಿಯ ಕುಡಿತವು ಮುಟ್ಟು ನಿಂತ ಮಹಿಳೆಯರು ಮತ್ತು ವಯೋವೃದ್ಧ ಪುರುಷರಲ್ಲಿ ಅಸ್ಥಿರಂಧ್ರತೆಗೆ ಕಾರಣವಾಗುವ ಬಿಎಂಡಿ ನಷ್ಟವನ್ನು ತಡೆಯಲೂ ಬಹುದು ಎಂದು ಹೇಳಿತ್ತೆಂಬುದಾಗಿ ಈ ಅಧ್ಯಯನದ ಸಹ ಲೇಖಕರಾಗಿರುವ ಕತ್ರಿನೆ ಎಲ್ ಟಕರ್ ಹೇಳಿದ್ದಾರೆ.

ಈ ಹಿಂದಿನ ಮಾರ್ಗದರ್ಶಿ ಸೂತ್ರದ ಪ್ರಕಾರ ದಿನ ಒಂದರ ಮಹಿಳೆಗೆ ಒಂದು ಡ್ರಿಂಕ್ ಮತ್ತು ಪುರುಷರಿಗೆ ಎರಡು ಡ್ರಿಂಕ್ ಸಲಹೆ ನೀಡಲಾಗಿತ್ತು.

ಹೊಸ ಅಧ್ಯಯನದ ಪ್ರಕಾರ ದಿನವೊಂದರ 356 ಎಂಎಲ್ ಬಿಯರ್, 118 ವೈನ್ ಮತ್ತು 42 ಎಂಎಲ್ ಮಿಶ್ರ ಮದ್ಯ ಅಥವಾ ಇತರ ಮದ್ಯ ಸೇವನೆ ಅಸ್ಥಿಯ ಬಲವನ್ನು ಹೆಚ್ಚಿಸುತ್ತದೆ ಎಂಬುದು ಅಧ್ಯಯನದ ಅಂಬೋಣ. ಇದಕ್ಕಿಂತಹ ಹೆಚ್ಚು ಮದ್ಯ ಸೇವನೆ ಅಪಾಯಕರ.

ಎಚ್ಚರಿಕೆ: ಅಂಕೆ ತಪ್ಪಿದರೆ ಆತಂಕ ತಪ್ಪದು. ಇತಿಮಿತಿಯ ಹದವರಿತ ಕುಡಿತ ಮಾತ್ರ ಕ್ಷೇಮಕರ. ಅದೂ ವಯೋವೃದ್ಧರಿಗೆ ಮಾತ್ರ

No comments: