ಮತ್ತೆ ನಿರ್ದೇಶನಕ್ಕಿಳಿದ ಕಾಶಿ

ಕಾಶಿ ಮತ್ತೆ ಕಾಶಿ ಅಲಿಯಾಸ್ ಕಾಶೀನಾಥ್ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅನುಭವ, ಅನಂತರ, ಆವಾಂತರ, ಅಪರಿಚಿತ, ಅನಾಮಿಕದಂತಹ ಅಕಾರ ಚಿತ್ರವನ್ನು ನಿರ್ದೇಶಿಸಿದ್ದ ಕಾಶಿ ಈ ಭಾರಿ ನಿರ್ದೇಶಿಸಲು ಹೊರಟಿರುವ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ.

ಆದರೆ ಚಿತ್ರಕ್ಕೆ ನಾಯಕನನ್ನು ಆಗಲೇ ಆಯ್ಕೆ ಮಾಡಿದ್ದಾರೆ. ಬೇರಾರು ಅಲ್ಲ. ಅಲೋಕ್. ತಮ್ಮ ಪುತ್ರನಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉಳಿದ ಕಲಾವಿದರ ಆಯ್ಕೆ ಹಾಗೂ ಚಿತ್ರಕತೆಯನ್ನು ಇನ್ನು ಕಾಯ್ದಿರಿಸಿದ್ದಾರೆ. ಕಾರಣ ಬಾಜಿ ಚಿತ್ರ.

ಈ ಚಿತ್ರದ ಬಗ್ಗೆ ಪ್ರೇಕ್ಷಕರ ಅಭಿಪ್ರಾಯದ ಮೇಲೆ ಮುಂದಿನ ಚಿತ್ರದ ಬಗ್ಗೆ ನಿರ್ಧರಿಸಿದ್ದಾರಂತೆ. ಗಾಯತ್ರಿ ಆರ್ಟ್ಸ್ ಬ್ಯಾನರ್ನಲ್ಲಿ ತಯಾರಾಗುತ್ತಿರುವ ಹತ್ತನೇ ಚಿತ್ರವಿದು. ಕಾಶಿನಾಥ್ ಅವರ ಜೊತೆಯಲ್ಲಿ ನಿರ್ಮಾಣದಲ್ಲಿ ಭಾಗಿಯಾಗಲು ಕೆಲವರು ಮುಂದೆ ಬಂದಿದ್ದಾರಂತೆ. ಆದರೆ ಅದನ್ನು ಕೂಡ ಕಾಯ್ದಿರಿಸಲಾಗಿದೆ. ಒಟ್ಟಿನಲ್ಲಿ ಬಾಜಿ ಮೇಲೆ ಅಲೋಕ್ ಭವಿಷ್ಯ ನಿಂತಿದೆ

No comments: